ನಮ್ಮ ಬಗ್ಗೆ

  • ಕರ್ನಾಟಕದ ವಿವಿಧ ನಗರಗಳಲ್ಲಿ ಪ್ರಯಾಣದ ಬೇಡಿಕೆಯ ಆವರ್ತಕ ಮೌಲ್ಯಮಾಪನ ಮತ್ತು ಸಮಗ್ರ ಚಲನಶೀಲತೆ ಯೋಜನೆಗಳನ್ನು ಸಿದ್ಧಪಡಿಸುವ ಮೂಲಕ ಚಲನಶೀಲತೆ ನಿರ್ವಹಣೆಗೆ ಯೋಜನೆ ನಿರೂಪಿಸುವುದು.
  • ಸುಸ್ಥಿರ ನಗರ ಸಾರಿಗೆ ಮಾದರಿಗಳ ಪಾಲನ್ನು ವರ್ಧಿಸಲು ನೀತಿಗಳ ಅಭಿವೃದ್ಧಿ. 
  • ಪ್ರಯಾಣದ ಬೇಡಿಕೆ ಮತ್ತು ಶಿಫಾರಸ್ಸುಗಳ ರಚನೆಯ ಆಧಾರದ ಮೇಲೆ ವಿವಿಧ ನಗರಗಳಲ್ಲಿ ಅಗತ್ಯವಿರುವ ಸಾರ್ವಜನಿಕ ಸಾರಿಗೆಯ ಮಟ್ಟವನ್ನು ನಿರ್ಧರಿಸುವುದು. 
  • ಟ್ರಾಫಿಕ್ ನಿರ್ವಹಣಾ ಯೋಜನೆಗಳು, ನಗರ ಸಾರಿಗೆ ಮೂಲಸೌಕರ್ಯ ಯೋಜನೆಗಳು ಇತ್ಯಾದಿಗಳನ್ನು ಅಭಿವೃದ್ಧಿಪಡಿಸುವಲ್ಲಿ ಭಾಗೀದಾರ ಸಂಸ್ಥೆಗಳಿಗೆ ತಾಂತ್ರಿಕ ನೆರವು ಮತ್ತು ವಿನ್ಯಾಸ ನೆರವು ಒದಗಿಸುವುದು. 
  • ಶೈಕ್ಷಣಿಕ, ಉದ್ಯಮ ಇತ್ಯಾದಿಗಳ ಸಹಯೋಗದೊಂದಿಗೆ ನಗರ ಚಲನಶೀಲತೆಯಲ್ಲಿ ಸಂಶೋಧನೆ ಮತ್ತು ಹೊಸ ಹೊಸ ಸಾಧ್ಯತೆಗಳನ್ನು ಬೆಂಬಲಿಸುವುದು. 
  • ದತ್ತಾಂಶದ ಸಂಗ್ರಹಣೆ ಮತ್ತು ನಗರ ಸಾರಿಗೆಯಲ್ಲಿ ದತ್ತಾಂಶ ಆಧಾರಿತ ನಿರ್ಧಾರ ಕೈಗೊಳ್ಳಲು ವಿಶ್ಲೇಷಣೆ ಮಾಡುವುದು. 
  • ಕಾರ್ಯಾಗಾರ, ತರಬೇತಿ ಕಾರ್ಯಕ್ರಮಗಳು ಇತ್ಯಾದಿಗಳ ಮೂಲಕ ಭಾಗೀದಾರ ಸಂಸ್ಥೆಗಳ ಸಾಮರ್ಥ್ಯವನ್ನು ಹೆಚ್ಚಿಸುವುದು. 
  • ಸುಸ್ಥಿರ ಚಲನಶೀಲತೆಯ ಅಭ್ಯಾಸಗಳ ಕುರಿತು ಸದಭಿಪ್ರಾಯ ಹಾಗೂ ಜಾಗೃತಿ ಮೂಡಿಸಲು ಸಂವಹನ ಮತ್ತು ಪ್ರಭಾವ ಬೀರುವ ಕಾರ್ಯಕ್ರಮಗಳನ್ನು ವ್ಯವಸ್ಥಿತಗೊಳಿಸುವುದು. 
  • ನೀತಿಗಳ ತಯಾರಿಕೆ, ವಿನ್ಯಾಸಗಳ ಅಂತಿಮಗೊಳಿಸುವಿಕೆ, ಯೋಜನೆಗಳ ಅಭಿವೃದ್ಧಿ ಮತ್ತು ಅನುಷ್ಠಾನದ ಸಮಯದಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯನ್ನು ಸುನಿಶ್ಚಿತಗೊಳಿಸುವುದು.

ಹೊಣೆಗಾರಿಕೆ: ಸಂಪನ್ಮೂಲಗಳು, ಪರಿಸರ ಹಾಗೂ ನಾವು ಸೇವೆ ಸಲ್ಲಿಸುವ ಜನರು ಮತ್ತು ಪರಸ್ಪರರ ಮೇಲೆ ನಮ್ಮ ಕ್ರಿಯೆಗಳ ಪ್ರಭಾವಕ್ಕೆ ಪ್ರತ್ಯೇಕವಾಗಿ ಮತ್ತು ಸಾಮೂಹಿಕವಾಗಿ ಜವಾಬ್ದಾರರಾಗಿರುವುದು. 

ಸಂವಹನ: ಮಾಹಿತಿಯನ್ನು ಮುಕ್ತವಾಗಿ, ಸ್ಪಷ್ಟವಾಗಿ ಮತ್ತು ಸಮಯೋಚಿತವಾಗಿ ಹಂಚಿಕೊಳ್ಳುವ ಸಂಸ್ಕೃತಿಯನ್ನು ಸೃಜನೆ ಮಾಡಿ - ಆಂತರಿಕವಾಗಿ ಮತ್ತು ಬಾಹ್ಯವಾಗಿ ಮತ್ತು ಪದಗಳು ಮತ್ತು ಕ್ರಿಯೆಗಳಲ್ಲಿ ಪೂರ್ವಭಾವಿಯಾಗಿರುವುದು. 

ಶ್ರೇಷ್ಠತೆ: ಸ್ಥಿರವಾಗಿ ಉತ್ತಮ ಗುಣಮಟ್ಟದ ಕೆಲಸದ ಹೊರಹೊಮ್ಮುವಿಕೆಗಾಗಿ ಯಾವಾಗಲೂ ಉತ್ತಮ ಫಲಿತಾಂಶಕ್ಕಾಗಿ ಶ್ರಮಿಸಿ ಮತ್ತು ಗುಣಮಟ್ಟವನ್ನು ಹೆಚ್ಚಿಸುತ್ತಲೇ ಇರುವುದು. 

ಸಮಗ್ರತೆ:  ಪ್ರಾಮಾಣಿಕತೆ ಮತ್ತು ಬದ್ಧತೆಯ ಮೂಲಕ ನಮ್ಮ ಎಲ್ಲಾ ಸಂಬಂಧಗಳಲ್ಲಿ ನಂಬಿಕೆ ಮತ್ತು ವಿಶ್ವಾಸವನ್ನು ನಿರ್ಮಿಸುವುದು ಮತ್ತು ಸರಿಯಾದುದನ್ನು ಮಾಡುವ ಧೈರ್ಯ ತುಂಬುವುದು. 

ತಂಡದ ಕೆಲಸ: ಒಂದು ಸಾಮಾನ್ಯ ಉದ್ದೇಶಕ್ಕಾಗಿ ಒಟ್ಟಾಗಿ ಕೆಲಸ ಮಾಡಲು ಮತ್ತು ಸಾಂಸ್ಥಿಕ ಗುರಿಗಳನ್ನು ಸಾಧಿಸಲು ಪರಸ್ಪರರ ಸಾಮರ್ಥ್ಯ ಮತ್ತು ಕೌಶಲ್ಯಗಳಿಗೆ ಪೂರಕವಾಗಿ ಕೆಲಸ ನಿರ್ವಹಿಸುವುದು. 

 

ಅಭಿವೃದ್ಧಿಗಾಗಿ ಒಂದು ಕಾರ್ಯತಂತ್ರದ ಚೌಕಟ್ಟು 

ಮುಂದಿನ ಐದು ವರ್ಷಗಳವರೆಗೆ ನಗರ ಭೂ ಸಾರಿಗೆ ನಿರ್ದೇಶನಾಲಯದ ನಿರ್ದೇಶನ, ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳಿಗೆ ಮಾರ್ಗದರ್ಶನ ನೀಡಲು ಸಂಸ್ಥೆಗೆ ಬೆಳವಣಿಗೆಯ ಕಾರ್ಯತಂತ್ರದ ಚೌಕಟ್ಟನ್ನು ಅಭಿವೃದ್ಧಿಪಡಿಸಲಾಗಿದೆ. ಕಾರ್ಯತಂತ್ರದ ಯೋಜನೆಯು ಹೊಸ ಅಥವಾ ಮಾರ್ಪಡಿಸಿದ ಗುರಿಗಳು ಮತ್ತು ಮೈಲಿಗಲ್ಲುಗಳೊಂದಿಗೆ ಪರಿವರ್ತನೆಯ ಕಾರ್ಯಸೂಚಿಯನ್ನು ರೂಪಿಸುತ್ತದೆ. ಇದು ಸಂಸ್ಥೆಯ ಅಂತರ್ಗತವಾದ ಶಕ್ತಿ ಸಾಮರ್ಥ್ಯಗಳು ಮತ್ತು ಅಂತರ್ಗತ ಶಕ್ತಿ ಮತ್ತು ಅದು ಕಾರ್ಯನಿರ್ವಹಿಸುವ ಬಾಹ್ಯ ಪರಿಸರವನ್ನು ಕೂಡ ಪರಿಗಣನೆಗೆ ತೆಗೆದುಕೊಂಡಿದೆ. 

ಈ ದಾಖಲೆಯನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ಪುನರ್‌ ಪರಿಶೀಲಿಸಲಾಗುತ್ತದೆ ಮತ್ತು ಕಾಲಕಾಲಕ್ಕೆ ತಕ್ಕಂತೆ ಅಗತ್ಯ ಬದಲಾವಣೆಗಳನ್ನು ಮಾಡಲಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

 

 

 

 

 

×
ABOUT DULT ORGANISATIONAL STRUCTURE PROJECTS