Who We Are ?

 

ನಗರ ಸಾರಿಗೆ ಯೋಜನೆಗಳು ಮತ್ತು ಕಾರ್ಯಕ್ರಮಗಳ ಯೋಜನೆ ಮತ್ತು ಅವುಗಳನ್ನು ಅನುಷ್ಠಾನಗೊಳಿಸುವ ಉದ್ದೇಶದಿಂದ ನಗರಾಭಿವೃದ್ಧಿ ಇಲಾಖೆಯ (UDD) ಅಧೀನದಲ್ಲಿ ಕರ್ನಾಟಕ ಸರ್ಕಾರವು (GoK) ನಗರ ಭೂ ಸಾರಿಗೆ ನಿರ್ದೇಶನಾಲಯವನ್ನು ಪ್ರಾರಂಭಿಸಿದೆ. ಕರ್ನಾಟಕವು ಭಾರತ ದೇಶದಲ್ಲಿ ನಗರ ಭೂ ಸಾರಿಗೆ ನಿರ್ದೇಶನಾಲಯವನ್ನು (DULT) ಹೊಂದಿರುವ ಏಕೈಕ ರಾಜ್ಯವಾಗಿದೆ. ರಾಜ್ಯದಲ್ಲಿ ನಗರ ಸಾರಿಗೆ ವಿಷಯಗಳನ್ನು ಸಮನ್ವಯಗೊಳಿಸಲು ರಾಷ್ಟ್ರೀಯ ನಗರ ಸಾರಿಗೆ ನೀತಿಯು (ಎನ್‌ಯುಟಿಪಿ) ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು 2007 ರಲ್ಲಿ ಈ ನಿರ್ದೇಶನಾಲಯವನ್ನು ಪ್ರಾರಂಭಿಸಿದೆ.

 

ಈ ನಿರ್ದೇಶನಾಲಯವು ಕರ್ನಾಟಕ ರಾಜ್ಯದ ನಗರ / ಸ್ಥಳೀಯ ಯೋಜನಾ ಪ್ರದೇಶಗಳಲ್ಲಿನ ಎಲ್ಲಾ ನಗರ ಭೂ ಸಾರಿಗೆ ಉಪಕ್ರಮಗಳ ಮೇಲ್ವಿಚಾರಣೆ ಮತ್ತು ರಾಜ್ಯ ನಗರ ಸಾರಿಗೆ ನಿಧಿ (SUTF) ಅನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿದೆ. ಪ್ರಪ್ರಥಮ ಬಾರಿಗೆ  ಅರ್ಹ ಹಾಗೂ ನಗರ ಸಾರಿಗೆ ನೀತಿಯಲ್ಲಿ ತರಬೇತಿ ಪಡೆದ ಅರ್ಹ ಸಿಬ್ಬಂದಿಯ ಸೇವೆಯನ್ನು ಸರ್ಕಾರಿ ವ್ಯವಸ್ಥೆಗೆ ತರಲಾಯಿತು.

 

ನಮ್ಮ ದೂರ ದೃಷ್ಟಿ:

ನಮ್ಮ ನಗರಗಳು ಮತ್ತು ಪಟ್ಟಣಗಳಿಗೆ ಸುಸ್ಥಿರ ಚಲನಶೀಲತೆ ಪರಿಹಾರಗಳನ್ನು ಯೋಜಿಸಲು, ವಿನ್ಯಾಸಗೊಳಿಸಲು ಮತ್ತು ತಲುಪಿಸಲು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಮರ್ಥ್ಯ, ಬದ್ಧತೆ ಮತ್ತು ಸೃಜನಶೀಲತೆಯನ್ನು ಹೊಂದಿರುವ ಸಂಸ್ಥೆಯಾಗಿ ಮಾಡುವ ಉದ್ದೇಶವನ್ನು ಹೊಂದಿದೆ.

 

ನಮ್ಮ ಸಂಸ್ಥೆಯ ಘನೋದ್ದೇಶ ಅಥವಾ ಗುರಿ:

ನಮ್ಮ ಪರಿಸರ ಮತ್ತು ನೆರೆಹೊರೆಗಳ ಗುಣಮಟ್ಟವನ್ನು ಕಾಪಾಡುವುದರೊಂದಿಗೆ ರಾಜ್ಯದ ಆರ್ಥಿಕ ಸ್ಪರ್ಧಾತ್ಮಕತೆ ಮತ್ತು ಸಮೃದ್ಧಿಯನ್ನು ಹೆಚ್ಚಿಸುವ ಶಕ್ತಿಶಾಲಿಯಾದ ಸಮರ್ಥ, ಸುಸ್ಥಿರ ಮತ್ತು ಸಮಗ್ರ ಸಾರಿಗೆ ವ್ಯವಸ್ಥೆಗಳ ಅನುಷ್ಠಾನವನ್ನು ಸುಲಭಗೊಳಿಸುವ ಮೂಲಕ ಕರ್ನಾಟಕದ ಜನರಿಗೆ ಸೇವೆ ಸಲ್ಲಿಸಲು ನಾವು ಬದ್ಧರಾಗಿದ್ದೇವೆ.

 

×
ABOUT DULT ORGANISATIONAL STRUCTURE PROJECTS